ಜೀವರಸಾಯನ ಶಾಸ್ತ್ರ

ಜೀವರಸಾಯನ ಶಾಸ್ತ್ರ ವಿಭಾಗದ ಸಂಕ್ಷಿಪ್ತ ಇತಿಹಾಸ:

 

1952  -  ಜೀವರಸಾಯನ ಶಾಸ್ತ್ರವು ರಸಾಯನ ಶಾಸ್ತ್ರದ ಭಾಗವಾಗಿ ಆರಂಭಗೊಂಡಿತು.

1954 - ಜೀವರಸಾಯನ ಶಾಸ್ತ್ರ ವಿಭಾಗವು, ಉಳಿದ ವಿಜ್ಞಾನದ ವಿಭಾಗಗಳೊಡನೆ ಬೆಂಗಳೂರಿನ   ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾವಣೆಗೊಂಡಿತು.

 

1962  - ಜೀವರಸಾಯನ ಶಾಸ್ತ್ರ ವಿಭಾಗವು ಮಾನಸಗಂಗೋತ್ರಿಗೆ ಪುನ: ವರ್ಗಾವಣೆಗೊಂಡಿತು. ಆದರೆ, ಪದವಿ ಪ್ರದಾನವನ್ನು ರಸಾಯನ ಶಾಸ್ತ್ರದ ಒಂದು ಭಾಗವಾಗಿ ಪರೀಗಣಿಸಿ ಕೊಡಲಾಗುತ್ತಿತ್ತು.

 

1974  - ಜೀವರಸಾಯನ ಶಾಸ್ತ್ರದಲ್ಲಿಯೇ ಸ್ನಾತಕೋತ್ತರ ಪದವಿಗಳನ್ನು ಕೊಡಲು ಪ್ರಾರಂಭಿಸಲಾಯಿತು.

1975  - ಚಾತುರ್ಮಾಸ (Semesಣeಡಿ) ಪರೀಕ್ಷಾ ಪದ್ಧತಿಯನ್ನು ಪ್ರಾರಂಭಿಸಲಾಯಿತು.

1980  - ಈಗಿರುವ ಸ್ವಂತ ಕಟ್ಟಡಕ್ಕೆ ವಿಭಾಗವನ್ನು ಸ್ಥಳಾಂತರಿಸಲಾಯಿತು.

2012  - ಈಗಿರುವ ಕಟ್ಟಡಕ್ಕೆ ಮೊದಲನೇ ಮಹಡಿಯ ಸೇರ್ಪಡೆ.

2015 - ವಿಭಾಗದಿಂದ “ಅಣುಜೀವ ವಿಜ್ಞಾನ”(ಒoಟeಛಿuಟಚಿಡಿ ಃioಟogಥಿ)ಎಂಬ ನೂತನ ಸ್ನಾತಕೋತ್ತರ ವಿಭಾಗದ ಪ್ರಾರಂಭ.

 

ಜೀವರಸಾಯನ ಶಾಸ್ತ್ರ ವಿಭಾಗ

 

ಈ ವಿಭಾಗವನ್ನು ಜೀವಶಾಸ್ತ್ರದ ಕ್ಷೇತ್ರದಲ್ಲಿ ಅತೀ ಬೇಡಿಕೆಯಲ್ಲಿರುವ ವಿಭಾಗವೆಂದು ಪರಿಗಣಿಸಿದರೂ ತಪ್ಪಾಗಲಾರದು.

 

        1952ರಲ್ಲಿ ಜೀವರಸಾಯನ ಶಾಸ್ತ್ರವನ್ನು ರಸಾಯನ ಶಾಸ್ತ್ರದ ಅಂಗವಾಗಿ ಪ್ರಾರಂಭಿಸಿದರೂ, 1974ರ ನಂತರ ಈ ವಿಭಾಗವು ಸ್ವತಂತ್ರವಾಗಿ ಬೆಳೆಯಿತು. ಪ್ರೊ.ಟಿ.ಆರ್.ರಾಮಯ್ಯನವರ ಅವಿರತ ಶ್ರಮದಿಂದ 1980ರಲ್ಲಿ ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಅತ್ಯುತ್ತಮ ಅಧ್ಯಾಪಕರ ತಂಡವನ್ನು ಹೊಂದಿದ್ದ ವಿಭಾಗವು ಇಂದಿಗೂ ನುರಿತ ಅಧ್ಯಾಪಕರನ್ನು ಹೊಂದಿದ್ದು, ವಿಶ್ವವಿದ್ಯಾಲಯದ ಶತಸಂಭ್ರಮದ ಸಮಯ ಅಣುಜೀವ ವಿಜ್ಞಾನ ವಿಭಾಗವೆಂಬ ಹೊಸ ವಿಷಯದಲ್ಲಿ ಸ್ನಾತಕೋತ್ತರ ವಿಭಾಗವನ್ನು ಪ್ರಾರಂಭಿಸಿದೆ. ಪ್ರೊ. ರಾಮಯ್ಯ. ಪ್ರೊ. ಶೇಷಾದ್ರಿ, ಜಿ.ಚಂದ್ರಶೇಖರಪ್ಪ, ಪ್ರೊ. ಟಿ.ವಿ.ಗೌಡ,  ಡಾ. ಬಿ.ಎನ್.ವೈ ಶೆಟ್ಟಿ, ಡಾ. ರೆಡ್ಡಿ, ಪ್ರೊ. ಕ್ಲೀಟಸ್ ಡಿಸೋಜ, ಪ್ರೊ. ಕರುಣ ಕುಮಾರ್, ಡಾ. ಎಂ. ಎಸ್. ಶೈಲಜಾ ಮೊದಲಾದ ಶ್ರೇಷ್ಠ ಅಧ್ಯಾಪಕರ ಗರಡಿಯಲ್ಲಿ ಬೆಳೆದ ವಿಭಾಗದ ಹಳೇ ವಿದ್ಯಾರ್ಥಿಗಳು ಇಂದು ಪ್ರಪಂಚದ ಎಲ್ಲಾ ಮೂಲೆಗಳಲ್ಲಿದ್ದು ವಿ. ವಿ. ಯ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ್ದಾರೆ. ವಿಭಾಗದ ಪ್ರಾರಂಭದಿಂದಲೂ ಇಲ್ಲಿಯವರೇಗೂ ಚಾತುರ್ಮಾಸ (Semesಣeಡಿ) ಶಿಕ್ಷಣವನ್ನು ನಡೆಸುಕೊಂಡು ಬರುತ್ತಿರುವುದು ವಿಭಾಗದ ವಿಶೇಷ. ಈಗ ಸೇವೆಸಲ್ಲಿಸುತ್ತಿರುವ ವಿಭಾಗದ ಅಧ್ಯಾಪಕರುಗಳ ವಿವರ ಈ ಕೆಳಗಿನಂತಿದೆ.