Computer Science

ವಿಭಾಗದ ಬಗ್ಗೆ

ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಡಿ.ಆರ್.ಡಿ.ಒ ರಕ್ಷಣಾ ಸಚಿವಾಲಯ ಭಾರತ ಸರ್ಕಾರದ ಸಹಕಾರದೊಂದಿಗೆ 1986ರಲ್ಲಿ ಎಂ.ಎಸ್ಸಿ ಗಣಕ ವಿಜ್ಞಾನ ವಿಷಯವು ಪ್ರಾರಂಭವಾಯಿತು. ಬಿ.ಎಸ್ಸಿ ಗಣಿತಶಾಸ್ತ್ರ ಒಂದು ವಿಷಯವಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಡಿ.ಆರ್.ಡಿ.ಒ ವತಿಯಿಂದ ವಿದ್ಯಾರ್ಥಿವೇತನದೊಂದಿಗೆ ಎಂ.ಎಸ್ಸಿ ಗಣಕ ವಿಜ್ಞಾನ ವಿಷಯಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಡಿ.ಆರ್.ಡಿ.ಒಯೊಂದಿಗಿನ 05 ವರ್ಷದ ಒಡಂಬಡಿಕೆ ಮುಗಿದ ನಂತರ ಮೈಸೂರು ವಿಶ್ವವಿದ್ಯಾನಿಲಯವು ಈ ವಿಭಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಇಂದಿನವರೆವಿಗೂ ಮಾನ್ಯತೆಯೊಂದಿಗೆ ನಡೆಸುತ್ತಿದೆ. 1991-92 ಇಸವಿಯಲ್ಲಿ ಈ ವಿಭಾಗವು ಸ್ವತಂತ್ರವಾದ ವಿಭಾಗವಾಗಿ ರಚನೆಗೊಂಡಿತು. ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್) ವಿಷಯವು 1992-93ರಲ್ಲಿ ಈ ವಿಭಾಗಕ್ಕೆ ಸೇರ್ಪಡೆಗೊಂಡಿತು. ಪ್ರಸ್ತುತ ವಿಭಾಗದಲ್ಲಿ ಸಂಶೋಧನೆಯೂ ಸಹಾ ಕಾರ್ಯಗತಗೊಂಡಿದೆ.

ಉತ್ತಮ ಗುಣಮಟ್ಟದ ಬೋಧನೆಗೆ ಈ ವಿಭಾಗವು ಬದ್ಧವಾಗಿದ್ದು ಈ ವಿಭಾಗದಿಂದ ತೇರ್ಗಡೆಗೊಂಡ ಹಲವಾರು ವಿದ್ಯಾರ್ಥಿಗಳು ಭಾರತ ಹಾಗೂ ಇನ್ನಿತರ ದೇಶಗಳ ಸಂಶೋಧನಾ ಪ್ರಯೋಗಾಲಯಗಳಲ್ಲಿ, ಕೈಗಾರಿಕೆಗಳಲ್ಲಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Pattern Recognition, Image Processing, Computer Vision, Character Recognition and Analysis, Artificial Intelligence, Symbolic Data Analysis, Dimensionality Reduction, Object Recognition, Pitman Shorthand Recognition, Multilingual Recognition, Internet, Web Technologies, Data Mining, Networking and Bioinformatics ಮುಂತಾದ ವಿಷಯಗಳಲ್ಲಿನ ಸಂಶೋಧನಾ ಚಟುವಟಿಕೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ.

01-01-1997 ರಿಂದ ಪ್ರಾರಂಭಗೊಂಡಂತೆ 41 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿ ಮತ್ತು 10 ವಿದ್ಯಾರ್ಥಿಗಳು ಎಂ.ಎಸ್ಸಿಟೆಕ್ (ಸಂಶೋಧನೆ) ಮುಖಾಂತರ ಡಾಕ್ಟರೇಟ್ ಪದವಿ ಪೂರ್ಣಗೊಳಿಸಿರುತ್ತಾರೆ. ಪ್ರಸ್ತುತ 39 ಅಭ್ಯರ್ಥಿಗಳು ಸಂಶೋಧಕರಾಗಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮಂಡನೆಗೊಂಡಿದ್ದು ವಿಭಾಗದಲ್ಲಿನ ಉತ್ತಮ ಗುಣ ಮಟ್ಟದ ಸಂಶೋಧನೆಗೆ ಕೈಗನ್ನಡಿಯಾಗಿದೆ. ವಿಭಾಗವು NCDAR 2001, NCDAR 2003, ICCR 2005, ICCR 2008, ICSIP 2009 ಮುಂತಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಗಾರ, ಸಮ್ಮೇಳನ ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಾ ಬಂದಿದ್ದು ಈ ಕಾರ್ಯಾಗಾರ, ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ಗಣಕ ವಿಜ್ಞಾನದಲ್ಲಿ ವಿಶ್ವ ಮಟ್ಟದಲ್ಲಿ ಮನ್ನಣೆಯುಳ್ಳ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ವಿಭಾಗದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮಾರ್ಗದರ್ಶನ, ಸಲಹೆಗಳನ್ನು ಒದಗಿಸುತ್ತ್ತಾ ಬಂದಿದೆ.

DST, UGC, AICTE and ISRO ಮುಂತಾದ ಸಂಸ್ಥೆಗಳಿಂದ ವಿವಿಧ ಸಂಶೋಧನಾ ಯೋಜನೆಗಳಿಗೆ ಹಣಕಾಸು ನೆರವನ್ನು ಪಡೆದು ಸಂಶೋಧನೆಗಳನ್ನು ಪೂರ್ಣಗೊಳಿಸಲಾಗಿದೆ.

ವಿಭಾಗವು ಅತ್ಯಾಧುನಿಕ ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಹೊಂದಿದೆ.

ವಿಭಾಗದ ಸೌಲಭ್ಯಗಳ ವಿವರ:

ಸೌಲಭ್ಯಗಳ ಪಟ್ಟಿಯನ್ನು ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

ವಿಭಾಗದ ಸೌಲಭ್ಯಗಳ ಫೋಟೋವನ್ನು ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ